kannada motivational thoughts ,Kannada best motivational quotes, love feeling quotes in kannada, kannada motivational thoughts,kannada inspirational quotes,kannada best quotes, kannada quotes about life, Kannada whatsapp status image,
Popular posts from this blog
ಒಲವು
ಚೈತ್ರ ತಂದ ಚಿಗುರಿನ ಹಾಗೆ ನಿನ್ನ ಸ್ನೇಹವು ಮಳೆ ಹನಿಗೆ ಚಿಗುರೊಡೆದಿದೆ ಮನದಲಿ ಒಲವು ಹೊಸತಾಗಿ ಮೂಡಿದೆ ಈ ಹೃದಯದಲಿ ಪ್ರೀತಿಯ ಸೆಳವು ನಿನ್ನ ಕಾಣಲು ಪ್ರತಿಕ್ಷಣವು ಆಸೆ ಪಡುತಿದೆ ನನ್ನೀ ಮನವು ಅತಿವೃಷ್ಟಿಯ ಮಳೆಯಂತೆ ಸುರಿಸಬೇಡಾ ನಿನ್ನ ಪ್ರೇಮವ ಸುತ್ತಲೂ ಪಚ್ಚೆ ಹಸಿರಿರುವಂತೆ ಹರಿಸು ಒಲವಿನ ಸುಧೆಯ ಬಯಕೆಯೆಂಬ ಮೋಹಕೆ ಆತುರದಲಿ ಬಿದ್ದು ಕೊರಗದಿರಲಿ ಮನವು ಮದುವೆಯೆಂಬ ಶಾಸ್ತ್ರದಲಿ ಒಂದಾಗಲಿ ನಮ್ಮಿಬ್ಬರ ತನುವು ಅರಿಯಬೇಕು ಹಿರಿಯರ ಆಶೀರ್ವಾದವೇ ಪ್ರೀತಿಗೆ ಗೆಲುವು ಕೊನೆತನಕ ಹೀಗೆ ಜೊತೆಯಾಗಿರಲಿ ನಮ್ಮಯ ಒಲವು
ನಿನ್ನಂಥ ಹುಡುಗಿ
ಸೂರ್ಯನ ಕಿರಣದ ನಿನ್ನ ರೂಪ ಚಂದ್ರನ ಬೆಳದಿಂಗಳ ಪ್ರತಿರೂಪ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ. ನನಗೆ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ ಕೇಳೆನು ಬೇರೇನನು ನಿನ್ನ ಪ್ರೀತಿಯ ಹೊರತು ಪ್ರತಿ ಕ್ಷಣವು ಪ್ರತಿ ಕಣವು ಹೋಗಿದೆ ನಿನ್ನಲ್ಲಿ ಬೆರೆತು ಪ್ರೀತಿಯ ಸ್ಪೂರ್ತಿಯ ತದರೂಪ ಬಾಳಿನ ಜ್ಯೋತಿಯ ಸ್ವರೂಪ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ ನನಗೆ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ ಸೆರೆಯಾದೆನು ನಿನ್ನ ಪ್ರೀತಿಗೆ ನಾನಿಂದು ಮರೆಯಾದೆನು ನನ್ನಿಂದಲೇ ನಾನಿಂದು ಕನಸಿನ ಪರಿಕಲ್ಪನೆಯ ಆಲಾಪ ಹೆಚ್ಚಾಯಿತು ನಿನ್ನಿಂದಲೇ ಸಲ್ಲಾಪ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ ನನಗೆ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ ಸೂರ್ಯನ ಕಿರಣದ ನಿನ್ನ ರೂಪ ಚಂದ್ರನ ಬೆಳದಿಂಗಳ ಪ್ರತಿರೂಪ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ ನನಗೆ ನಿನ್ನಂಥ ಹುಡುಗಿ ಸಿಗುವುದೇ ಅಪರೂಪ

Comments
Post a Comment