ಮೌನ ಭಾಷೆ

 ನನ್ನೀ ಮನವ ಅರಿಯದ ನೀನು

ಜಗಳವಾದರೂ ಆಡಿ ಬಿಡು

ಮೌನ ಮಾತ್ರ ನಾ ಸಹಿಸೆ

ದಹಿಸುವ ಅಗ್ನಿಯ ಒಮ್ಮೆ ನೋಡು



ಸಹಿಸಬಹುದೇನೋ ಕಬ್ಬಿಣದ  

ಮೊನಚು ಈಟಿಯ ತಿವಿತ

ನೂರುಚಾಟಿಯ ಹೊಡೆತ

ಕಾಡಾನೆಗಳ ಕಾಲ್ತುಳಿತ


ಉತ್ತರವಿಲ್ಲದ ಮೌನ

ತಿರಸ್ಕಾರದ ಮುಖಚರ್ಯೆ

ಮೇಲುಸಿರ ಎದೆಬಡಿತ 

ತಾಳಲಾರೆ ನಾ ಆರ್ಯೆ

Comments

Popular posts from this blog