【ಕವನ :- ಚಿಂತಿಸದಿರು ಗೆಳತಿ ನಾ ಚಿತೆಯಲ್ಲಿದ್ದರೂ..!】
ರವಿ ತಾ ಬಂದು,
ಬೆಳಗಿ ಈ ಭುವಿಯನೆಂದೂ,
ಹೊರಡನೇ ಮತ್ತೆ ಬರುವೆನೆಂದು ?
ಸಂಜೆ ಕೆಂಗಿರಣಗಳ ಬರವಸೆಯನಿಟ್ಟು,
ಚಂದ್ರನಲಿ ತನ್ನ ಬಿಂಬವ ಗುರುತಿಟ್ಟು.
ಚಿಂತಿಸದಿರು ಗೆಳತಿ ನಾ ಚಿತೆಯಲ್ಲಿದ್ದರೂ..!
ಮಳೆಹನಿಗಳು ಎಲೆಗಳ ಸೇರಿ,
ಎಲೆಗೆ ಅದು ಭಾರವಾಗಿ,
ಹನಿಗಳು ಮತ್ತೆ ಸೇರುವ ಮಾತ ನೀಡಿ,
ಮಣ್ಣು ಸೇರದೆ ?
ಗಿಡದ ಖಾಂಡ ಹನಿಯ ಹೀರಿ,
ಎಲೆಗೆ ಅದು ಮರಳಿ ನೀಡದೇ ?
ಚಿಂತಿಸದಿರು ಗೆಳತಿ ನಾ ಚಿತೆಯಲ್ಲಿದ್ದರೂ..!
ಭುವಿಯ ಉತ್ತಿ,
ಬೀಜ ಬಿತ್ತಿ,
ಬೆಳೆ ಬೆಳೆಯುವವರೆಗೂ ಕಾದು- ಕಾವಲಿದ್ದರೂ,
ಮಳೆ-ಬಿರುಗಾಳಿಗೆ ಬೆಳೆ ನಾಶವಾಗದೇ ?
ಭುವಿ ಮತ್ತೆ ಉತ್ತಿ-ಬಿತ್ತಲು ಬೆಳೆ ನೀಡದೇ?
ಚಿಂತಿಸದಿರು ಗೆಳತಿ ನಾ ಚಿತೆಯಲ್ಲಿದ್ದರೂ..!
ಇಂದು, ನಾ ಮಲಗಿರಲು,
ಉಸಿರು ಸೇವಿಸುವುದ ಮರೆತಿರಲು,
ನಾನು-ನನ್ನದು-ನನ್ನವರ ತ್ಯಜಿಸಿರಲೂ,
ರವಿ ಮುಳುಗಿ, ಮಳೆ ನಿಂತು, ಗಾಳಿ ತೂಗುತಿರಲು,
ಚಿಂತಿಸದಿರು ಗೆಳತಿ ನಾ ಚಿತೆಯಲ್ಲಿದ್ದರೂ..,
ಚಿತೆಯಲ್ಲಿ ಸುಡುತಿರುವುದು ನನ್ನ ದೇಹ ಮಾತ್ರ
ನನ್ನ ನೆನಪಲ್ಲಾ , ನನ್ನ ಮನಸಲ್ಲಾ, ನಿನ್ನೊಳಗಿರುವ ನನ್ನನಲಾ..!!!
Comments
Post a Comment