ಮನಸ್ಸಿನ ಮಾತು

 


ಜೀವನ ಎಂಬ ರಂಗಿನ ಓಟದಲ್ಲಿ ಜೊತೆಯಾಗಿ ಜೊತೆಗಾತಿ

ನಿನ್ನ ನೋಡಿದ ಮರುಗಳಿಗೆ ಮರುಳಾದೆ ಮಾಟಗಾತಿ

ನನ್ನ ಮನದ ಕಾಮನಬಿಲ್ಲು ನೀನೇ ಚೆಲುವೆ

ನನ್ನ ಕನಸಿನ ಅರಮನೆ ನೀನೆ ಒಲವೆ


ನಾನು ನೋಡಿದ ಮೊದಲ ದಿನವೇ ಸೋತೆ

ಬರೆದೆ ನಿನ್ನ ಅಂದವ ಹೊಗಳುತ ಪ್ರೇಮ ಕವಿತೆ

ಇರುವೆ ನಾ ಎಂದೆಂದೂ ನಿನ್ನ ಜೊತೆ 

ನಿನಗಾಗಿ ತೆರೆದಿದೆ ಹೃದಯದ ಖಾತೆ


ನಿನ್ನ ಚೆಲುವಿನ ಮನಸ್ಸಿಗೆ ಕನ್ನಡಿಯಾಗುವ ನಾನು

ನಿನ್ನ ಮೊಗದ ಚೆಲುವಿಗೆ ಸೋತಿದೆ ಭಾನು

 ನನಗಾಗಿ ಹುಟ್ಟಿರುವ ನೀನು ನಿನಗಾಗಿ ಹುಟ್ಟಿರುವೆ ನಾನು

Comments