ಪ್ರೀತಿಯ ಭಾಷ್ಯ

 


ಪ್ರೀತಿ ಎಂಬ ಗಿಳಿಗೆ

ನಾಚಿಕೆ ಎಂಬ ಸರಳು

ಭಯವೆಂಬ ಬಾಗಿಲಿಗೆ

ಮನವೆಂಬ ಬೀಗದ ಎಸಳು


ಬೀಗ ಒಡೆದ ಒಡೆಯ

ಬಾಗಿಲ ತೆರೆದು ನೋಡಲು

ಪಂಜರದೊಳಿದ್ದ ಹಕ್ಕಿ

ಹಾರಿತದೋ ಅವನ ಸೇರಲು


ಇರುಳ ಕೈ ಮಯ್ಯ ಬಳಸಿ

ಆಸೆ ಮೊಳಕೆ ಒಡೆಯಲು

ರೆಕ್ಕೆ ಬಡಿದು ಹಾರಿತದು

ಎಲ್ಲೆ ಮೀರಿ ತಣಿಸಲು

Comments

Popular posts from this blog