ಹೃದಯದರಸಿಗೆ…
ಹೊಸೆದ ಹೊಂಗನಸುಗಳ ಸಾಕಾರವೆಂಬಂತೆ,
ನನ್ನೊಲವಿನರಮನೆಗೆ ಬಂದೆ ನೀನು.
ನಿನ್ನೊಲುಮೆಯಿಂದೆನ್ನ ಬದುಕು ನಂದನವಾಯ್ತು,
ಜೀವನಕೆ ಹೊಸ ಹೆಸರ ಬರೆದೆ ನೀನು.
ಯಾವ ಜನ್ಮದ ಮೈತ್ರಿ, ನೀ ಬಂದೆ ಬಾಳಿನೊಳು,
ಒಲವ ಬಂಧನವಾಯ್ತು ನಮ್ಮ ನಡುವೆ.
ನೋವಿರಲಿ ನಲಿವಿರಲಿ ಅನುಘಳಿಗೆ ಜೊತೆಗಿರುವೆ,
ತುಂಬು ಪ್ರೀತಿಯನೆಂದೂ ಮೊಗೆಮೊಗೆದು ಕೊಡುವೆ.
ಹೃದಯದರಸಿಯೆ ಕೇಳು ಉಸಿರು ನೀನೆನಗೆ,
ನಮ್ಮ ಪ್ರೀತಿಯ ಬಂಧ ಇರಲಿ ಕೊನೆವೆರೆಗೆ.
ಯಾವ ದೇವರ ವರವೋ ಕಾಣೆ ಈ ಬೆಸುಗೆ,
ಬದುಕು ಸುಂದರ ಕವಿತೆ, ನೀನಿರಲು ಜೊತೆಗೆ.
– ಶ್ರೀನಿವಾಸ ನಾಯಕ್
Comments
Post a Comment