ನಗು
ನಿನ್ನ ಮೋರೆ ನೋಡುತ ನಸುನಕ್ಕ ಮನಃ,
ಸ್ವಾಗತಿಸಿದೆ ವಸಂತದ ಹಣ್ಣೆಲೆಯ ಬನ...
ಶ್ವೇತ ಭಾವ ಸೋಜಿಗವು ಗುಳಿಗೆನ್ನೆ ಮಚ್ಚೆ,
ಪಾರಿಜಾತ ಲಜ್ಜೆ ತೊರೆದು ಕೇಶ ಸೇರಿವೆ ನವೀನ...
ಬಿಂಬ ಬೆಂಬಿಡದ ನಯನದಿ ಕಂಡೆ ನಿನ್ನ ನಯನ,
ಹಾರಿ ಹೋಯಿತು ಶುಕಗಳು ಪುಳಕಿಸಿ ಮನ...
ಅರಿಯದ ಅರಿವಿಗೆ ಮಾಡಬೇಕಿದೆ ನಾಮಕರಣ,
ಹೃದಯವು ಈ ಕ್ಷಣದಿ ತಿಳಿಸಿದೆ ನಾನಿನ್ನವಳ ಸ್ವಾದೀನ...
Comments
Post a Comment