ಅನಾಮಿಕೆ

 

ಹುಣ್ಣಿಮೆ ಚಂದ್ರನ ಮೊಗದಗಲದ ಸಿಹಿ-
ನಗುವಿನ ಚೆಲುವೆಯು ಯಾರಿವಳು?
ಮೋಹಕ ನೋಟದ,‌ ಮಾಂತ್ರಿಕ ಸೆಳವಿನ,
ಸೌಂದರ್ಯದ ಖನಿ ಯಾರಿವಳು?

ಕಪ್ಪನೆ ಮುಗಿಲಿಗೆ ಮುದಗೊಳ್ಳುತ ಗರಿ-
ಅರಳಿಸಿ ನಲಿಯುವ ಗಿರಿ ನವಿಲಿನ,
ನಾಟ್ಯವ ನಾಚಿಸೊ ಸುಂದರ ನಡಿಗೆಯ,
ಯಾರಿದು ಬೆಳದಿಂಗಳ ಬಾಲೆ?

ಸಂಜೆಯ ಸೂರ್ಯನ ಹೊಂಬೆಳಕಿಗೆ ಮೈ-
ಒಡ್ಡಿದ ಸಾಗರದಂಚಿನ ಚಂದವ,
ಮೀರಿಸೊ ಮಳೆಬಿಲ್ಲಂತಿಹ ಸುಂದರಿ
ಯಾರಿದು ಕವಿ ಕಣ್ಣಿನ ಮೇಲೆ?

– ಶ್ರೀನಿವಾಸ ನಾಯಕ್

Comments

Popular posts from this blog