ಸತ್ಯ

 


ಕಡಲ ಅಲೆಗಳು ಅಪ್ಪಳಿಸಲು

ಕಲ್ಲು ಕರಗುವುದೆ..? 

ಕಪ್ಪನೆ ಮೋಡ ಕರಗಬಹುದಾದರೇನು..?

ಕಪ್ಪೆಂಬ ಬಣ್ಣ ಅಳಿಸಲಾದೀತೆ...?

ಕಣ್ಣು ಇರಲು ಎರಡು,

ಕಣ್ಣೀರ ತಡೆಯಲಾದೀತೆ...? 

ಹುಚ್ಚು ಬರೀ ಹುಚ್ಚು 


ಆಗಸ ಇರುವುದೇ ನೀಲಿ ಬಣ್ಣ 

ಬದಲಾಗುವ ಮೋಡಗಳ ಆಟಕ್ಕೆ, 

ಮುಗಿಲು ಸ್ಪಂದಿಸದೇ ಇರಲು ಸಾಧ್ಯವೇ..? 

ಬೆಳಕು ಬಯಸಿದರೇನು ಕತ್ತಲಾಗದಿರುವುದೇ?

ಏನೇನೋ ಯೋಚನೆ ಜೊತೆಗಿನ ತಳಮಳ, 

ಅಂತ್ಯವೇ ಕಾಣದ ಮನದ ಗೊಂದಲ


ಬುರುಡೆಯಲ್ಲಿಟ್ಟ ಬುದ್ದಿ ಎಂಬ ಬಣ್ಣ 

ಒಮ್ಮೊಮ್ಮೆ ಹುಚ್ಚಾಟದಲಿ ಮುಚ್ಚಿದ ಕಣ್ಣ

ಮನುಜನ ಕಲ್ಪನೆಗಳಿಗೆ ಕೊನೆಯೇ ಇಲ್ಲ 

ಕಲ್ಪಿಸಿಕೊಳ್ಳಲು ಸತ್ಯವು ಮರೆಯಾಗುವದಲ್ಲ

ಅರಿತು ನಡೆಯುವುದರೊಳಗೆ

ನಲುಗುವುದು ಮುರಿದ ಸಂಬಂಧದೊಳಗೆ ಮನ..

Comments

Popular posts from this blog