ಭಾವಗೀತೆ
ನೀನು ಮಾತು, ನಾನು ಮೌನ,
ಹದದಿ ಸೇರಲು ಜೀವನ…
ಒಲವು ಸುರಿವ ನಮ್ಮ ಬದುಕು,
ಭವದಿ ಮುಗಿಯದ ಬಂಧನ…
ನನ್ನ ಪದವು, ನಿನ್ನ ಸ್ವರವು,
ಲಯದಿ ಬೆಸೆದರೆ ರಾಗವು…
ನನ್ನ ಕವಿತೆ, ನಿನ್ನ ಭಾವ,
ಮುದದಿ ಬೆರೆತರೆ ಗೀತವು…
ನನ್ನ ನಿನ್ನ ಭಾವಗೀತೆ…
ಭರದಿ ಹರಿವ ಗಂಗೆಯಂತೆ.
ಸಂಜೆ ಬಾನ ರಂಗಿನಂತೆ…
ಮುದ್ದು ಮಗುವ ಮನಸಿನಂತೆ.
– ಶ್ರೀನಿವಾಸ ನಾಯಕ್
Comments
Post a Comment