ಮಗಳು
ಸೃಷ್ಟಿಯೊಳಗೆ ಒಂದು ಬೆರಗು,
ನೀಗಲೆಂದೇ ಭವದ ಕೊರಗು,
ದೇವರೆಲ್ಲ ಜೊತೆಗೆ ಸೇರಿ,
ಆಸ್ಥೆಯಿಂದ ಕಡೆದ ಶಿಲ್ಪ,
ಮಗಳು… ಮಗಳು…
ಮೌನ ನೀಗಿಸಿ, ಮಾತು ಪೋಣಿಸಿ,
ಮರೆಸಿ ಮನಸಿನ ಬೇಸರ…
ತಮವನಳಿಸಿ, ಬೆಳಕು ಹರಿಸಿ,
ಮನೆಯ ಬೆಳಗುವ ನೇಸರ…
ಮಗಳು… ಮಗಳು….
ಸಕಲಕೆಲ್ಲಕೆ ಪ್ರೀತಿ ಕೊಡುವ,
ಎನಿತು ಕಾಣೆನವಳ ರೂಪ.
ಒಲಿಸಿದಂತೆ ಒಲಿಸಿಕೊಳುವ,
ಜಗದ ತುಂಬಾ ಒಲವ ದೀಪ,
ಮಗಳು… ಮಗಳು…
– ಶ್ರೀನಿವಾಸ ನಾಯಕ್

Comments
Post a Comment