ಮಾಯಾವಿ
ಮಾಯಾವಿ ನೀನೂ ಸಂದೇಹವಿಲ್ಲ
ಮನಃದಲಿ ವ್ಯವಹರಿಸಿ ಒಯ್ದಿರುವೆ ನನ್ನ ಹೃದಯವ...
ಜಾದೂ ಮಾಡಿ ನಯನದಿ ಬರಿದಾದ ಮನಃ ತುಂಬಿದೆ
ನಡೆಸಿದೆ ಚೋರಿಯಂತೆ ಹೃದಯ ಚೋರ ಕಾರ್ಯವ...
ಸಂವಾದ ಬೇಡವೆಂದಳು ಅವಳ ಹೃದಯ ಕೊಟ್ಟಳು,
ಪಿಸುಗುಟ್ಟಿತು ಮನಃವಂದು ಪ್ರೀತಿಯ ಪದವ...
ಅರಿವಿಲ್ಲದೆ ಮಾತಲೆ ಮನಃಗಳು ವಿನಿಮಯವಾಗಿದೆ,
ನೋಟ ತೋರಿ ನೀಡಿದೆ ಪ್ರೀತಿ ಪಥವ...
Comments
Post a Comment