ಕೊರೋನಾ ಮತ್ತು ಶಾಲೆ



 ಕೊರೋನಾ ಬಂತು ಶಾಲೆ ಮುಚ್ಚಿತು

ಪುಟ್ಟನು ಖುಷಿ ಖುಷಿಯಾದನು

ಹೊಂವರ್ಕ್ ಇಲ್ಲ ಬಾಯಿ ಪಾಠವಿಲ್ಲ

ಸದಾ ಟಿವಿ ಮೊಬೈಲ್ ಗೇಮ್ಸ್

ಊಟ ಬೇಡ ಅಮ್ಮನೂ ಬೇಡ


ದಿನಗಳು ಉರುಳಿತು

ಪುಟ್ಟನಿಗೆ ಬೇಸರವಾಯಿತು

ಯಾರನ್ನೂ ನೋಡಲಾಗುತ್ತಿಲ್ಲ 

ಯಾರನ್ನೂ ಮಾತನಾಡಿಸಲಾಗುತ್ತಿಲ್ಲ

ಪುಸ್ತಕ ಪೆನ್ಸಿಲ್ ಪೆನ್ನು ಬೇಕು 

ಡ್ರಾಯಿಂಗ್ ಬರೆಯಬೇಕು

ಅಮ್ಮ ಸ್ಕೂಲ್ ಬ್ಯಾಗು ಮೇಲಿಟ್ಟಳು

ಕೊರೋನಾ ಭೀತಿಯಿಂದ


ಕೊರೋನಾ ಅಂಟು ರೋಗ 

ಎಲ್ಲಿ ಅಂಟಿ ಕೊಳ್ಳುವುದೊ ಚಿಂತೆ

ಮಕ್ಕಳ ಮನಸು ಮಂಗನ ಮನಸು

ಒಮ್ಮೆ ಸ್ಕೂಲ್ ಬೇಕು ಮತ್ತೊಮ್ಮೆ ಸ್ಕೂಲ್ ಬೇಡ

ಹಠಕ್ಕೆ ಬಿದ್ದರೆ ಸಂಭಾಳಿಸುವುದು ಕಷ್ಟ 


ದಿನೇ ದಿನೇ ಕೊರೋನಾ ಅರ್ಭಟಿಸುತ್ತಿದೆ

ಮಕ್ಕಳ ಅಭ್ಯಾಸ ಕುಂಟಿತಗೊಳ್ಳುತ್ತಿದೆ

ಶಾಲೆಗೆ ಕಳುಹಿಸಿದರೆ ಮಕ್ಕಳ ಕೂಟ

ಕ್ವಾರೆಂಟೇನ್ ತಪಾಸಣೆ ಕಾಟ       


ಇದ್ದವರಿಗೆ ವಾಟ್ಸಾಪ್ ಆನ್‍ಲೈನ್ ಪಾಠ

ಇಲ್ಲದವರಿಗೆ ಆದೇ ಓಟ

ಎಲ್ಲರಿಗೂ ಓದು ಬೇಕು ಆರೋಗ್ಯ ಗಮನಿಸಬೇಕು

ವಾಟ್ಸ್ ಆಪ್ ಪಾಠ ಬೇಕು 

ಸಿಡಿ ಡಿವಿಡಿ ಪ್ಲೇಯರ್ ಪಾಠ ಕೇಳಬೇಕು


ಇ-ಸ್ಕೂಲ್ ನಡೆಸಬೇಕು ಯಾ

ಪ್ರಮುಖ ತರಗತಿಗಳು ನಡೆಯಬೇಕು 

ತಪ್ಪಿದರೆ ತಿಂಗಳೊಂದರಂತೆ ಪ್ರತಿ 

ತರಗತಿಯು ನಡೆಯಬೇಕು 

ಕೊರೋನಾ ತೊಲಗಬೇಕು

ಮಕ್ಕಳು ಜಾಣಮರಿಗಳಾಗಬೇಕು

Comments

Popular posts from this blog