ಏನೆಂದು ಬರೆಯಲಿ…
ಯುಗಳ ಗೀತೆ.
(ಗಂ) ಏನೆಂದು ಬರೆಯಲಿ ನಾನು, ಈ ನಿನ್ನ ಹೆಸರಿನ ಕೊನೆಗೆ
ಮನಸಾಗಿದೆ ನನ್ನದೆ ಹೆಸರ ಬರೆದು ಬಿಡಲು
(ಹೆ) ಏನೆಂದು ಹೇಳಲಿ ನಾನು, ಈ ನಿನ್ನ ಒಲವಿನ ಕರೆಗೆ
ಮನಸಾಗಿದೆ ನಿನ್ನಯ ಬಳಿಗೆ ಬಂದು ಬಿಡಲು
(ಗಂ) ಮುಂಜಾವ ಚುಮುಚುಮು ಚಳಿಗೆ, ನಿನ್ನೊಲವ ಬೆಚ್ಚನೆ ಹೊದಿಕೆ
ಬೇಕೆಂದು ಬಯಸಿದೆ ಮನವು ಒಂದೇ ಸಮನೆ
(ಹೆ) ನೀನಿರದ ಒಂದರೆಘಳಿಗೆ ಎದೆಯೊಳಗೆ ಬಲು ಚಡಪಡಿಕೆ
ನಾನರಿಯೆ ನನ್ನೊಳಗೇಕೋ ಇಂಥ ಬವಣೆ
(ಗಂ) ಕನಸೊಂದು ಕಾಡಿದ ಸಮಯ, ಬೇಕೆಂದು ನಿನ್ನಯ ಸನಿಹ
ಮೆದುವಾಗಿ ಬೇಡಿದೆ ಹೃದಯ, ಮನ್ನಿಸುವೆಯಾ?
(ಹೆ) ನಿನಗೆಂದೆ ಮುಡುಪಿದು ಜೀವ, ಇನ್ನೆಂದೂ ತಾಳದು ವಿರಹ
ನನ್ನೊಲುಮೆಗೆಂದಿಗೂ ಒಡೆಯ, ನೀನೆ ಇನಿಯ.
– ಶ್ರೀನಿವಾಸ ನಾಯಕ್

Comments
Post a Comment