ನವಿಲುಗರಿ ನರ್ತಿಸಿದೆ

 


ನಿನ್ನ ನಗುವಲ್ಲಿ ನವಿಲು ಗರಿ ನರ್ತಿಸಿದೆ 

ನಕ್ಕಾಗ ನಾನೆ ನಿಂತು ನಿನ್ನ ಕೆನ್ನೆ ಸ್ಪರ್ಶಿಸಿದೆ 


ನನ್ನ ಸ್ಪರ್ಶದಲ್ಲೂ ನರ್ತಿಸಿದ ನಿನ್ನ ಬೆಣ್ಣೆಯಂಥ ಕೆನ್ನೆ 

ತಾಕಿತು ಕೈಗೆ ಹಳ್ಳ ಅದುವೇ ನಿನ್ನ ಗುಳಿಯ ಗಲ್ಲ 


ಸೂರ್ಯನ ಹೊಳಪಿನ ಕಣ್ಣಿಗೆ 

ಹಾಲು ಬಿಳುಪಿನ ಚೆಂಡಿನ ಗುಡ್ಡೆ 

ಅದರೊಳಗಿನ ಬಂಡೆ ಕಲ್ಲಿನ ಗಂಡಿನ ಬಿಂಬ ನಿನ್ನೆ ನೋಡುತ್ತ ಎನ್ನುತ್ತಿದೆ ಎಂಥಾ ಸೌಂದರ್ಯ ಅಬ್ಬಾ 



ಬೆರಳ ಸೋಕಿಸಿ ಜಾರಿ ಬಿದ್ದೆ ನಿನ್ನ ಮೂಗಿನ ತುದಿಗೆ ಬಂದು ಸಿಕ್ಕಿಕೊಂಡೆ.


ಇಳಿಜಾರು ನಾಸಿಕ ಕೆಳಗೆ ಜೇನು ಹರಿಯುತ್ತಿದೆ 

ಸವಿಯಬೇಕೆಂದಿರುವೆ ನಾ ಚುಂಬನದ ಚಂಬುವಿನಲ್ಲಿ.


ತುಂಬಿಸಿ ಕಾಣದ ಮಾಯ ಜಲವನ್ನು ಪಂಚ ಇಂದ್ರಿಯಗಳಿಗೆ ನೀಡಿ ಪುಣ್ಯಾತ್ಮನಾಗುವೆ. 

ಹ್ಮ್ ಅಂದುಬಿಡು ಮೇಣದ ಹಾಗೆ ಕರಗುವೆ 

ಇಲ್ಲ ನಿನ್ನ ನವಿಲಗರಿ ಕಡ್ಡಿಯ ಹಾಗೆ ಸೊರಗುವೆ 


ತಡೆದುಕೊಂಡಷ್ಟು ತೊಂದರೆ ಕೊಡುವುದು ನಿನ್ನ ತರಲೆ ಪ್ರೀತಿ

ಅದೇಕೋ ಕಾಣೆ ನಿನ್ನ ನಗುವಲ್ಲಿ ನವಿಲು ಗರಿ ನರ್ತಿಸಿದೆ.

Comments

Popular posts from this blog