ಇನ್ನೂ ಬಾಕಿ ಇದೆ

 




ನಮ್ಮಿಬ್ಬರ ಅಕ್ಷಿಗಳ ಮಿಲನದಿಂದ ಪ್ರಥಮ

ಪ್ರೇಮವೀಗ ನನ್ನಲ್ಲಿ ಉದ್ಭವವಾಗಿದೆ.

ನಸುನಗುತ ಗುಳಿಕೆನ್ನೆಯಿಂದ ನೀನೊಮ್ಮೆ

ಸಮ್ಮತಿಸುವುದು ಇನ್ನೂ ಬಾಕಿ ಇದೆ.


ನಿನ್ನ ಅಧರಗಳ ಚಲನೆಯಿಂದ ಉದುರುವುದು

ಮುತ್ತುಗಳೆಂದು ನನಗೆ ತಿಳಿದಿದೆ.

ಮಧುರ ಧ್ವನಿಯ ಕೇಳಿ ನನ್ನ ಕರ್ಣಗಳನ್ನು

ಇಂಪಾಗಿಸುವುದು ಇನ್ನೂ ಬಾಕಿ ಇದೆ.


ಉದ್ದನೆಯ ಜಡೆಯನ್ನು ನೀನು ಸರಿಸುವ

ದೃಶ್ಯವು ಮನಕ್ಕೆ ಸಂತಸ ನೀಡಿದೆ.

ಕೇಶಕ್ಕೊಂದು ರೋಜಾ ಹೂವನ್ನು ನಾನು

ಮುಡಿಸುವುದು ಇನ್ನೂ ಬಾಕಿ ಇದೆ.


ನಡುವ ಬಳುಕಿಸುತಲಿ ವೈಯಾರದಿ ನಡೆಯುವ

ನಿನ್ನ ಶೈಲಿಯು ವಿಭಿನ್ನವಾಗಿದೆ.

ಅದ ನೋಡುತಲೇ ಸೋತಿರಲು ನಾನು ಕೊರಳಿಗೆ

ತಾಳಿ ಕಟ್ಟುವುದು ಇನ್ನೂ ಬಾಕಿ ಇದೆ.


ನಿನ್ನ ಪಾದಗಳ ಸ್ಪರ್ಶದಿಂದ ನನ್ನೆದೆಯು

ಹರ್ಷದಿ ಕುಣಿ ಕುಣಿದಾಡಿದೆ.

ನನ್ನ ಬೆರಳುಗಳು ಕಾತರದಿಂದ ಕಾಲುಂಗುರವ

ತೊಡಿಸುವುದು ಇನ್ನೂ ಬಾಕಿ ಇದೆ.

Comments

Popular posts from this blog